Monday, April 27, 2009

ಹರಿಹರದಲ್ಲಿ ಹೀಗೊಬ್ಬರು ಕೌತುಕ

ಹರಿಹರ್ ಗೆ ಕೆಲಸಕ್ಕೆಂದು ಹೋಗಿದ್ದೆವು
ಅಲ್ಲಿ ಯಾರೋ ಹೇಳಿದರು
ಓಂಕಾರೇಶ್ವರ ಮಠದಲ್ಲಿ ದತ್ತಾತ್ರೇಯ ಸ್ವಾಮೀಗಳು ಇದ್ದುದ್ದನ್ನು ಇದ್ದಂತೇ ಹೇಳುತ್ತಾರೆ ಎಂದು
ನಾವೆಲ್ಲಾ ಹೋಗಿ ಕೂತಿದ್ದೆವು
ದತ್ತಾತ್ರೇಯ ಸ್ವಾಮಿಗಳಿಗೆ ಜಾತಕ ಅಥವ ಜನ್ಮ ದಿನಾಂಕ ಯಾವುದೋ ಬೇಕಿಲ್ಲ.
ಕೇವಲ ಮುಖ ನೋಡಿ ಹೇಳುವಂತ ಶಕ್ತಿ ಇದೆ
ನನ್ನನ್ನು ನೋಡಿದ ಕೂಡಲೆ ನಿಮಗೆ ಹೊಟ್ಟೆ ನೋವು ಜಾಸ್ತಿ ಅಲ್ಲವೇ ಎಂದರು
ಅದು ನಿಜ
ಅಷ್ಟಕ್ಕೆ ಅಚ್ಚರಿ ನಿಲ್ಲಲಿಲ್ಲ
ನಮ್ಮ ಮನೆಯವರದು ಇದು ಮೂರನೆ ಕೆಲಸ ಎಂದೂ ಹೇಳಿದರು
ಹಾಗು ವಿಷ್ಣುವಿಗೆ ಸಂಬಂಧ ಪಟ್ಟ ಒಂದು ವೃತವನ್ನು ನಿಲ್ಲಿಸಿದ್ದೀರ ಎಂದು ತಿಳಿಸಿದರು
ಅದು ನಿಜ . ನಾವು ಅನಂತನ ವೃತವನ್ನು ಮಾಡುತ್ತಿಲ್ಲ
ನಂತರ ನನಗೆ ಸಂಬಂಧ ಪಟ್ಟ ಕೆಲವೊಂದು ವಿಷಯ್ ಹೇಳಿದರು. ಅವೆಲ್ಲಾ ನಿಜವೇ ಆಗಿತ್ತು
ಅಷ್ತಕ್ಕೂ ಅವರ್ಯಾರೋ ನಾವ್ಯಾರೋ ಅವರಿಗೆ ನಾವೂ ಗೊತ್ತಿಲ್ಲ ನಮಗೆ ಅವರೂ ಅಷ್ಟು ನಿಖಿರವಾಗಿ ಹೇಳಲು ಹೇಗೆ ಸಾದ್ಯವಾಯಿತು?
ನಮ್ಮಂತೆಯೇ ಸುಮಾರು ಜನರಿಗೂ ಅವರ ವಿಷಯ್ಗ ಗಳನ್ನುಹೇಳಿ ನಮ್ಮೆಲ್ಲರನ್ನೂ ಅಚ್ಚರಿಗೆ ನೂಕಿದರು
ಅವರು ಹಣವನ್ನೂ ಕೇಳಲಿಲ್ಲ.
ಕೇವಲ ಮಂತ್ರವೊಂದಷ್ಟನ್ನು ಬರೆದುಕೊಟ್ಟು ಅದನ್ನುಹೇಳಲು ಹೇಳಿದರು
ನಮ್ಮ ಮನೆಗೆ ಪೂರ್ವರದಒಂದು ಅರಳೀ ಮರವಿರ್

Friday, April 17, 2009

ಅಶೋಕ ಚಕ್ರವರ್ತಿ ಕಲಿಯುಗ ಇವುಗಳ ಅರಿವು ವೇದವ್ಯಾಸರಿಗೆ ಮೊದಲೇ ಅರಿವಿತ್ತು

ಇಂದು ಭಾಗವತದ ಹನ್ನೆರೆಡನೆ ಸ್ಕಂದ ಓದಿದೆ.ಶುಕ ಮಹರ್ಷಿಗಳು ಪರೀಕ್ಷಿತ ರಾಜನಿಗೆ ಕೃಷ್ಣನ ಇಹಲೋಕ ತ್ಯಾಗದ ನಂತರ ಏನಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ಹೇಳಿದ್ದಾರೆ.ಕಂಸನ ಮಾವ ಜರಾಸಂಧನ ವಂಶಜ ರಿಪುಂಜಯನ ನಂತರ ಅವನ ಮಂತ್ರಿ ಶುನಕನ ಪುತ್ರ ಪ್ರದ್ಯೋತ , ನಂತರ ಅವನ ಮಗ ಪಾಲಕ, ಹೀಗೆ ವಂಶ ವೃಕ್ಷ ಬೆಳೆದುಮಹಾನಂದಿಯ ಕಿರಿಯ ಹೆಂಡತಿಯ ಮಗ ನಂದ ಹಾಗು ಅವನ ಎಂಟು ಮಕ್ಕಳು ರಾಜ್ಯವನ್ನು ಆಳುತ್ತಾರೆ ಇವರ ವಧೆಯು ಚಾಣಕ್ಯನ ಸಹಾಯದಿಂದ ಚಂದ್ರಗುಪ್ತ ಮೌರ್ಯನ ಮ್ ಕಡೆಯಿಂದ ಆಗುತ್ತದೆ, ಚಂದ್ರಗುಪ್ತ ಮೌರ್ಯನ ಮೊಮ್ಮಗ ಅಶೋಕವರ್ಧನನು ನಂತರ ಮಹಾರಾಜನಾಗುತ್ತಾನೆಜೊತೆಗೆ ಕಲಿಯುಗದ ಅಂತ್ಯವನ್ನೂ ಬರೆದಿದ್ದಾರೆಕಲಿಯುಗದಲ್ಲಿ ಜನರು ದೇವರನ್ನು ಧರ್ಮವನ್ನೂ ಪ್ರಶ್ನಿಸುತ್ತಾರೆ. ಹೊಟ್ಟೆ ಪಾಡೊಂದೇ ಧರ್ಮವೆನಿಸುತ್ತದೆ. ಜನರು ದುರ್ಗುಣಿಗಳಾಗಿಯೂ ವರ್ಣಗಳ ಅವಮಾನವನ್ನೂ ಮಾಡುತ್ತಾರೆ.ಆಗಾಗ ಚಂಡಮಾರುತ, ಭೂಕಂಪ ಇತ್ಯಾದಿಗಳು ಜರುಗುತ್ತಲಿರುತ್ತವೆಕಲಿಯುಗದ ಅಂತ್ಯ ಸೂರ್ಯ ಚಂದ್ರ ಹಾಗು ಗುರು ಈ ಮೂರು ಒಂದೇ ರಾಶಿಯಲ್ಲಿ ಜೊತೆಯಾಗಿ ಸೇರಿದ ದಿನವೇ ಆಗುತ್ತದೆ.ಇದೆಲ್ಲಾವನ್ನು ಸಾವಿರಾರು ವರ್ಷ್ಗಗಳ ಹಿಂದೆಯೇ ವೇದ ವ್ಯಾಸರು ವೀಕ್ಷಿಸಿದ್ದಾರೆ.ಎಷ್ಟು ಸತ್ಯಗಳನ್ನು ನುಡಿದಿದ್ದಾರೆ.ಸುಮ್ಮನೆ ತಮ್ಮಗಳ ಆವಾಹನೆಗಷ್ಟೆ

ದೇವರೆಂದರೆ ನನ್ನ ಪ್ರಕಾರ ..............................

ಹೌದು ಒಮ್ಮೊಮ್ಮೆ ನಾನೇಕೆ ಇಷ್ಟೊಂದು ದೇವರ ಬಗ್ಗೆ ಧರ್ಮದ ಬಗ್ಗೆ ಭಾವುಕಳಾಗುತ್ತೇನೆ.ನನಗೆ ಒಳಿತಾದರೂ ಕೆಡುಕಾದರೂ ದೇವರನ್ನೇ ಕಾರಣ ಮಾಡುತ್ತೇನೆ ?ಹೀಗೆ ಹಲವು ಪ್ರಶ್ನೆಗಳನ್ನು ಹಾಕಿಕೊಂಡಾಗಲೆಲ್ಲಾ ನನಗೆ ನೆನಪಾಗುವುದು ನನ್ನದೇ ಹಿನ್ನೆಲೆ. ನನ್ನ ಜೀವನ.ಜೀವನದ ಹಲವು ಕ್ಷಣಗಳಲ್ಲಿ ಜೀವನವೆ ಮುಗಿಯುತ್ತದೆ ಎಂದುಕೊಂಡಾಗಲೆಲ್ಲಾ"ಅಯ್ಯೋ ಪೆದ್ದಿ ಇದು ಅಂತ್ಯವಲ್ಲ ಆರಂಭ" ಎಂದು ದೇವರೇ ಬಂದು ಹೇಳಿದಂತೆ ಭಾಸವಾಗುತ್ತದೆಆಷ್ಟಕ್ಕೂ ಈ ದೇವರು ಯಾರು ಹೇಗೆ ಇದ್ದಾನೆ ಎಂದು ನಾನೆ ಎಷ್ಟೋ ಬಾರಿ ಯೋಚಿಸಿದ್ದೇನೆನಾನು ಗಣೇಶನನ್ನು ನಂಬಿ ಮೊರೆಹೊಕ್ಕರೆ ನನ್ನ ಮನಸಿಗೆ ಗಣೇಶನಾಗಿಯೂದುರ್ಗಿಯನ್ನು ನೆನೆದು ಪೂಜಿಸಿದರೆ ಮನಸಿಗೆ ದುರ್ಗಿಯಾಗಿಯೂ ದರ್ಶನ ನೀಡುವ ಈ ಶಕ್ತಿ ಅಷ್ಟಕ್ಕೂ ಎಲ್ಲಿಂದ ಬಂದಿದೆ ?ಅಂತ: ಶಕ್ತಿ ಎನ್ನಲೋ ಬಾಹ್ಯ ಶಕ್ತಿ ಎನ್ನಲೋಯಾವುದೋ ಒಂದು ಶಕ್ತಿ ಆದರೆ ಪ್ರಪಂಚದಲ್ಲಿ ನಮಗೆ ಮೀರಿದ ಶಕ್ತಿ ಒಂದಿದೆ ಎನ್ನುವುದಂತೂ ಖಂಡಿತಾ ಅದು ಬೇರೆಯವರಿಗೆ ಹೇಗೋ ಏನೋಆದರೆ ನನ್ನಂಥವರ ಪಾಲಿಗಂತೂ ನಿಜ.ನಾನು ಮೊರೆಹೊಕ್ಕಾಗಲೆಲ್ಲಾ ಆಶ್ಚರ್ಯವಾಗುವಂತೆ ಫಲಗಳು ಲಭಿಸಿವೆ ಹಾಗೆಂದು ನಾನು ದೇವರನ್ನು ನೆನೆದುಕೊಂಡು ಕೈಕಟ್ಟಿ ಕೂತಿರಲಿಲ್ಲನನ್ನ ಪ್ರಯತ್ನದ ಜೊತೆ ದೈವ ಬಲವೂ ಸೇರಿದ್ದು ಕಾಕತಾಳೀಯವಂತೂ ಅಲ್ಲವೇ ಅಲ್ಲಪತಿರಾಯರು ರಾಘವೇಂದ್ರರ ಪರಮ ಭಕ್ತರಾಗಿದ್ದಕ್ಕೂ ಅವರಿಗೆ ಆಗುವ ಒಳ್ಳೇಯದೆಲ್ಲಾ ಗುರುವಾರವೇ ಆಗುವುದಕ್ಕೂ ಏನಾದರೂ ಸಂಬಂಧವಿದೆಯೇಎಲ್ಲವೂ ಕಾಕತಾಳೀಯವಾಗುವುದಿಲ್ಲ ಅಲ್ಲವೇ?ಯಾವಾಗಲೋ ಒಮ್ಮೆ ಮಗುವಿಗೆ ಹುಷಾರಿಲ್ಲವೆಂದು ದೇವಿಗೆ ಹರಸಿಕೊಂಡು ಹೋಗಲಾಗದೆ ಆ ವಿಷಯವನ್ನು ಮರೆತೇ ಬಿಟ್ಟಾಗವಿಜಯದಶಮಿಯಂದು ದೇವಿ ಕನಸಿನಲ್ಲಿ ಕೋಪಗೊಂಡು ನಿಂತಿದ್ದು. ಅದಲ್ಲದೆ ಅದೇ ದೇವಿ ಮತ್ತೆ ಆ ವಿಷಯ ಗೊತ್ತೇ ಇಲ್ಲದ ನಮ್ಮ ಸೋದರತ್ತೆಯವರ ಕನಸಿನಲ್ಲಿಯೂ ಬಂದುನಮ್ಮ ಕಣಕಟ್ಟೆಯ ಪ್ರಯಾಣದ ಬಗ್ಗೆ ನೆನಪಿಸಿದ್ದು ಸಹಾ ಕಾಕತಾಳೀಯವಾಗಲೂ ಸಾಧ್ಯವೇ ಇಲ್ಲ ಅಲ್ಲವೇ?ಶನಿ ದೆಸೆ ಇದ್ದಾಗ ಬಂದೊದಗಿದ ಬೆಟ್ಟದಂತಹ ಕಷ್ಟ ಅಶ್ವಥ್ ವೃಕ್ಷವನ್ನು ಬಿಡದೆ ಸುತ್ತಿದಾಗ ಮಂಜಿನಂತೆ ಕರಗಿಹೋಗಿದ್ದು ಕಾಕತಾಳಿಯವಲ್ಲ ಅಲ್ಲವೇಹೀಗೆ ಜೀವನದ ಹಲವು ಮಜಲುಗಳಲ್ಲಿ ತಾಯಿಯಂತೆ ನನ್ನನ್ನು ಕಾಪಾಡಿದ ಕಾಪಾಡುತ್ತಿರುವ ದೇವರನ್ನು ಕಳ್ಳ, ಕೊಲೆಗಾರ, ಸುಲಿಗೆಕಾರ , ಇಲ್ಲವೇ ಇಲ್ಲಎಂದಾಗ ಮನಸಿಗೆ ನೋವಾಗುವುದು ಖಂಡಿತಾ ಅಲ್ಲವೇ?ನಾಸ್ತಿಕವಾದಿಗಳನ್ನು ಆಸ್ತಿಕರು ಎಂದೂ ಖಂಡಿಸಿಲ್ಲ . ಅವರ ನಂಬಿಕೆ ಅವರದು ಆದರೆ ಅನಾವಶ್ಯಕವಾಗಿ ಆಸ್ತಿಕರನ್ನು ಅವರ ನಂಬಿಕೆಗಳನ್ನು ಹಿಡಿದು ಹಿಪ್ಪೆ ಮಾಡಿವಿಕೃತಾನಂದ ಪಡೆಯುವ ಬುದ್ದಿಯವರಿಗೇನನ್ನಬೇಕು?

ದೇವರ ನಗು

ದೇವರು ನಗುತ್ತಾನೆ
ಅಯ್ಯೋ ಮೂರ್ಖ ಮಾನವಜಗದಲ್ಲಿ ನಾನಿಲ್ಲ
ಎಂದು ವಾದಿಸಿದರೇನು ಫಲ
ನಿನ್ನೊಳಗಾ ಭಾವ ಮೂಡಿಸಿದವ ನಾನಲ್ಲವೇ?
ಜಗದಾಚಿನ ಲೋಕವ ಹುಡುಕಿ ಏನು ಮಾಡುವೆ
ನಿನ್ನದೇ ಬದುಕಿನ ಅಂತರಾಳ ಕಾಣದೇ ನಿನಗೆ
ನಿನ್ನೊಂದಿಗ್ರಿರುವವರ ದ್ವೇಷಿಸಿ ಕಾಣದವರ
ಹುಡುಕೆಬಂತೇನು ಭಾಗ್ಯ
ಬಾಳ ಪ್ರತಿ ಪುಟದಲ್ಲಿಯೂ ಸಹಿ ಮಾಡಿದವ ನಾ
ಅದರಂತೆ ಸಾಗುತಿಹುದು ನಿನ್ನ ಬಾಳು
ಅರಿವಿರದೆ ಅಟ್ಟಹಾಸದಿ ನಗುತಿರುವೆ ನೀ
ವಿಜ್ನಾನದಿ ನೀ ತೋರಬಲ್ಲೆಯಾ ನಾಳೆಯಾ?
ಬರಿ ಗೈಯ್ಯಲ್ಲಿ ಸೂರ್ಯನ ಹಿಡಿಯಬಲ್ಲೆಯಾ?
ನದಿಯೊಂದ ಸೃಷ್ಟಿಸು ನೀನೊಮ್ಮೆ
ಪರ್ವತವ ಮಾಡು ಹಾಗೊಮ್ಮೆ
ಸೃಷ್ಟಿಯಲ್ಲಿ ಪ್ರತಿ ಸೃಷ್ಟಿ ಮಾಡಿ ಗೆಲ್ಲುವೆಯಾ?
ಜೀವವಿರದ ಯಂತ್ರ ಗೊಂಬೆ ಮಾಡಿ ನಲಿವೆಯಾ?
ಜೀವವಿರದ ಯಂತ್ರ ಮಾಡೆ ಏನು ಸಾಧನೆ
ಯಂತ್ರಗೊಂಬೆಗೆ ಜೀವ ತರಲು ಸಾಧ್ಯವೆ?
ಅದಿ ಕಾಲದಿ ಬಂದ ಧರ್ಮದಿಶ್ರದ್ದೆ ಕರ್ತವ್ಯದ ತಳುಕಿದೆ
ಆಧುನಿಕತೆಯ ಹೆಸರಿನಲ್ಲಿ ಮೆರೆವ ನಿನ್ನಲ್ಲಿಅಹಂ, ನಿರ್ಲಕ್ಷ್ಯದ ಕೊಳಕಿದೆ
ಎಲ್ಲ ಬಲ್ಲೆನೆಂಬ ಗರ್ವದಿ ಎನ್ನ ಜರಿದರೇನು ಫಲ
ಫಲಾಫಲಗಳ ಒಡೆಯ ನಾ
ಮಾಡಿದುಂಡ ಇತಿಹಾಸದನೇಕ
ಸುರಾಸುರರ ಪಟ್ಟಿಗೆ ಸೇರುವೆ ನೀ
ಸುಖದ ಸೋಪಾನದಲ್ಲಿ ಮಲಗಿದವನಿಗೆ
ನನ್ನ ಹಂಗೇಕೆ
ಕಷ್ಟ ಕುಲುಮೆಯಲ್ಲಿ ಬೇಯುವವನಿಗೆ
ಮೊರೆಯೊಂದೆ ದಾರಿ ನನ್ನ ಕಟಾಕ್ಷಕೆ