ದೇವರು ನಗುತ್ತಾನೆ
ಅಯ್ಯೋ ಮೂರ್ಖ ಮಾನವಜಗದಲ್ಲಿ ನಾನಿಲ್ಲ
ಎಂದು ವಾದಿಸಿದರೇನು ಫಲ
ನಿನ್ನೊಳಗಾ ಭಾವ ಮೂಡಿಸಿದವ ನಾನಲ್ಲವೇ?
ಜಗದಾಚಿನ ಲೋಕವ ಹುಡುಕಿ ಏನು ಮಾಡುವೆ
ನಿನ್ನದೇ ಬದುಕಿನ ಅಂತರಾಳ ಕಾಣದೇ ನಿನಗೆ
ನಿನ್ನೊಂದಿಗ್ರಿರುವವರ ದ್ವೇಷಿಸಿ ಕಾಣದವರ
ಹುಡುಕೆಬಂತೇನು ಭಾಗ್ಯ
ಬಾಳ ಪ್ರತಿ ಪುಟದಲ್ಲಿಯೂ ಸಹಿ ಮಾಡಿದವ ನಾ
ಅದರಂತೆ ಸಾಗುತಿಹುದು ನಿನ್ನ ಬಾಳು
ಅರಿವಿರದೆ ಅಟ್ಟಹಾಸದಿ ನಗುತಿರುವೆ ನೀ
ವಿಜ್ನಾನದಿ ನೀ ತೋರಬಲ್ಲೆಯಾ ನಾಳೆಯಾ?
ಬರಿ ಗೈಯ್ಯಲ್ಲಿ ಸೂರ್ಯನ ಹಿಡಿಯಬಲ್ಲೆಯಾ?
ನದಿಯೊಂದ ಸೃಷ್ಟಿಸು ನೀನೊಮ್ಮೆ
ಪರ್ವತವ ಮಾಡು ಹಾಗೊಮ್ಮೆ
ಸೃಷ್ಟಿಯಲ್ಲಿ ಪ್ರತಿ ಸೃಷ್ಟಿ ಮಾಡಿ ಗೆಲ್ಲುವೆಯಾ?
ಜೀವವಿರದ ಯಂತ್ರ ಗೊಂಬೆ ಮಾಡಿ ನಲಿವೆಯಾ?
ಜೀವವಿರದ ಯಂತ್ರ ಮಾಡೆ ಏನು ಸಾಧನೆ
ಯಂತ್ರಗೊಂಬೆಗೆ ಜೀವ ತರಲು ಸಾಧ್ಯವೆ?
ಅದಿ ಕಾಲದಿ ಬಂದ ಧರ್ಮದಿಶ್ರದ್ದೆ ಕರ್ತವ್ಯದ ತಳುಕಿದೆ
ಆಧುನಿಕತೆಯ ಹೆಸರಿನಲ್ಲಿ ಮೆರೆವ ನಿನ್ನಲ್ಲಿಅಹಂ, ನಿರ್ಲಕ್ಷ್ಯದ ಕೊಳಕಿದೆ
ಎಲ್ಲ ಬಲ್ಲೆನೆಂಬ ಗರ್ವದಿ ಎನ್ನ ಜರಿದರೇನು ಫಲ
ಫಲಾಫಲಗಳ ಒಡೆಯ ನಾ
ಮಾಡಿದುಂಡ ಇತಿಹಾಸದನೇಕ
ಸುರಾಸುರರ ಪಟ್ಟಿಗೆ ಸೇರುವೆ ನೀ
ಸುಖದ ಸೋಪಾನದಲ್ಲಿ ಮಲಗಿದವನಿಗೆ
ನನ್ನ ಹಂಗೇಕೆ
ಕಷ್ಟ ಕುಲುಮೆಯಲ್ಲಿ ಬೇಯುವವನಿಗೆ
ಮೊರೆಯೊಂದೆ ದಾರಿ ನನ್ನ ಕಟಾಕ್ಷಕೆ
Subscribe to:
Post Comments (Atom)
ರೂಪ ಅವ್ರೆ ಬರಹ ಚೆನ್ನಾಗಿದೆ...
ReplyDeleteನೀವು ಸಂಪದ ಮತ್ತು ವಿಸ್ಮಯನಗರಿಯಲ್ಲಿ ಬರೆಯುವಿರೋ?
>>>>>
"ಕೆಲವೊಂದು ವಿಷಯಗಳ ಬಗ್ಗೆ ಬರೀಬೇಕು ಅಂದುಕೊಂಡಾಗೆಲ್ಲಾ ಎಲ್ಲಿ ಯಾರ ಮನಸು ನೋಯಿಸುತ್ತೋ ಎನ್ನುವ ಭಯ ಕಾಡುತ್ತಿರುತ್ತದೆ ಹಾಗಂತ ನನ್ನ ಮನದ ಕೆಲವು ಸೂಕ್ಷ್ಮ ಭಾವನೆಗಳನ್ನು ಹೊರ ಹಾಕದೇ ಇರಲೂ ಸಾಧ್ಯವಿಲ್ಲ .ಆದ್ದರಿಂದ ದೇವರ ಬಗ್ಗೆಗಿನ ನನ್ನ ಕೆಲವು ಭಾವನೆಗಳಿಗೆ, ಅನುಭವಕ್ಕೆ, ಅನಿಸಿಕೆಗೆ ಕನ್ನಡಿ ಈ ಬ್ಲಾಗ್"
ಈ ಬ್ಲಾಗ್ ರೂಪಿಸಿದ ಬಗ್ಗೆ ನಿಮ್ಮ ವಿವಾರದಲ್ಲಿ ನೀವ್ ಹೇಳಿಕೊಂಡದ್ದು ಬಹುತೇಕ ಬ್ಲಾಗ್ ಬರೆಯುವರ ಮನದಾಳದ ಭಾವನೆಯೇ ಹೌದು...ಈ ಕ್ಷಣಕ್ಕೆ ನನದೂ...!!
ಶುಭವಾಗಲಿ..
\|/